Search for products..

Home / Categories / Kannada /

ನೆನೆ ಪುಟ್ಟ ನೆನೆ

ನೆನೆ ಪುಟ್ಟ ನೆನೆ

Select Language *



Product details

ಖ್ಯಾತ ಸಾಹಿತಿ, ವಿಮರ್ಶಕ ಡಾ. ಕೆ.ವಿ. ತಿರುಮಲೇಶ್ ಅವರು ಬರೆದ ಮಕ್ಕಳ ಕವನ ಸಂಕಲನ-ನೆನೆ ಪುಟ್ಟ ನೆನೆ. ಮಕ್ಕಳ ಕುತೂಹಲಕ್ಕೆ ಸಾಟಿಯೇ ಇಲ್ಲ. ಅವರ ಅದ್ಭುತ ಕಲ್ಪನಾ ಲೋಕವೂ ಅಷ್ಟೇ. ವಾಸ್ತವ ಲೋಕದ ಜಡ ವಸ್ತುಗಳನ್ನೂ ಸಹ ಹಸುಳೆಗಳು ಕಲ್ಪನಾಲೋಕದ ಮೂಲಕವೇ ಗ್ರಹಿಸುತ್ತವೆ. ಗೊಂಬೆಗಳು ಅವರಿಗೆ ಜೀವಂತ ವ್ಯಕ್ತಿಗಳಾಗಿ ಕಾಣಬರುವುದು ಈ ಕಾರಣಕ್ಕಾಗಿಯೇ. ಇಂತಹ ಸೂಕ್ಷ್ಮ ಮನಸ್ಸಿನ ಪದರುಗಳನ್ನು ಅಭ್ಯಸಿಸಿ, ಮಕ್ಕಳ ಮನೋಮಟ್ಟಕ್ಕೆ ಇಳಿದು, ಅವರಿಗೆ ತಿಳಿಯುವ ಸರಳ ಭಾಷೆಯಲ್ಲಿ ಕವಿತೆಗಳಿರುವುದು ಈ ಸಂಕಲನದ ವಿಶೇಷ. ಮಕ್ಕಳು ತಂದೆ-ತಾಯಿಯ ಮನಸ್ಸನ್ನು ಬೇಗನೇ ಆರ್ಥ ಮಾಡಿಕೊಳ್ಳುತ್ತಾರೆ. ಅವರು ಹೇಳಿದ ಮಾತುಗಳನ್ನು ಗಮನವಿಟ್ಟು ಕೇಳುತ್ತಾರೆ. ಆದ್ದರಿಂದ, ತಂದೆ-ತಾಯಿ ಸೇರಿದಂತೆ ಅಜ್ಜ-ಅಜ್ಜಿಯರು ಕಥೆಗಳನ್ನು ಹೇಳುತ್ತಾ, ಅವರ ಮನಸ್ಸಿಗೆ ಸಂಸ್ಕಾರ ನೀಡುತ್ತಾರೆ. ಇಂತಹ ಸಂಗತಿಗಳ ಕುರಿತು ಪದೇ ಪದೆ ಮೆಲುಕು ಹಾಕುತ್ತಿರು ಎಂಬ ಅರ್ಥದಲ್ಲಿಯೂ ಕವಿಗಳು ‘ನೆನೆ ಪುಟ್ಟ ನೆನೆ’ ಎಂಬ ಶೀರ್ಷಿಕೆ ನೀಡಿ, ಮಕ್ಕಳ ವ್ಯಕ್ತಿತ್ವ ರೂಪಿಸುವ ಉದ್ದೇಶ ತೋರಿದ್ದಾರೆ


Similar products


Home

Cart

Account