Product details
ನಾಯಿಮರಿ ನಾಯಿಮರಿ, ತಿಂಡಿ ಬೇಕೆ?' ನಾಯಿಮರಿ ಎಂದರೆ ಯಾವ ಮಗುವಿಗೆ ತಾನೇ ಇಷ್ಟವಿಲ್ಲ ಹೇಳಿ! ಪ್ರೀತಿಯಿಂದ ಒಂದು ನಾಯಿಮರಿಗೆ 'ಪ್ರಿಟ್ಟಿ' ಎಂದು ಹೆಸರಿಟ್ಟು, ಅದನ್ನು ಮನೆಗೆ ತಂದು ಸಾಕುವ ಅನುಭವವನ್ನು ಈ ಚಿತ್ರ ಪುಸ್ತಕದಲ್ಲಿ ದಾಖಲಿಸಲಾಗಿದೆ.
ತಾನು ಸಾಕಬೇಕೆಂದು ಬಯಸಿದ ನಾಯಿಮರಿಯನ್ನು ಹುಡುಕಿಕೊಂಡು ಹೋಗುವ ಮಗುವಿನ ಕಥೆ, ಅದರ ಮುಗ್ಧ ಆಸೆ ಮತ್ತು ಪ್ರೀತಿಯನ್ನು ಆಪ್ತವಾಗಿ ತೆರೆದಿಡುತ್ತದೆ. ಪೇಪರ್ ಕೊಲಾಜ್ ಕಲಾಶೈಲಿಯಲ್ಲಿ ಚಿತ್ರಿತವಾಗಿರುವುದು ಈ ಪುಸ್ತಕದ ವಿಶೇಷ, ಚಿತ್ರಗಳನ್ನು ಪೇಪರ್ ಕೊಲಾಜ್ ನಲ್ಲಿ ಚಿತ್ರಿಸಲಾಗಿದೆ.
Similar products