Search for products..

Home / Categories / 13+ Years /

ಪುಟ್ಟ ಜನ್ನು ದೊಡ್ಡ ಕಣ್ಣು

ಪುಟ್ಟ ಜನ್ನು ದೊಡ್ಡ ಕಣ್ಣು




Product details

ಶೀರ್ಷಿಕೆಯಲ್ಲಿ ಜನ್ನು ಅಂತಷ್ಟೇ ಇದ್ದರೂ ಇದು ಅವನೊಬ್ಬನ ಕತೆಯಲ್ಲ. ಆರೇಳು ವರ್ಷದ ಜನ್ನುವಿನ ಜೊತೆ ಅವನಿಗಿಂತ ಸ್ವಲ್ಪ ದೊಡ್ಡವಳಾದ ಜಾನು, ಇನ್ನೂ ತೊದಲು ಮಾತಾಡುವಷ್ಟು ಚಿಕ್ಕವಳಾದ ಪುಟ್ಟಿ ಮತ್ತು ಅವನಷ್ಟೇ ವಯಸ್ಸಿನ ಗೆಳೆಯ ತಿಮ್ಮ- ಈ ಎಲ್ಲರೂ ಒಟ್ಟಿಗೇ ಕಳೆದ ಒಂದು ರಜೆಯ ಕತೆ ಇದು.

ಕೆಲವು ಸಲ ನಮ್ಮ ಬದುಕಿನ ಒಂದು ಪುಟ್ಟ ಅವಧಿ ನಮ್ಮನ್ನು ವರ್ಷಗಟ್ಟಲೆ ದೊಡ್ಡವರನ್ನಾಗಿಸಿಬಿಡುತ್ತದೆ. ಉಳಿದ ಮೂರು ಮಕ್ಕಳೊಂದಿಗೆ ಚಿಕ್ಕಮ್ಮನ ಊರಿನಲ್ಲಿ ಜನ್ನು ಕಳೆದ ಆ ಬೇಸಗೆ ರಜೆ ಅವನ ಲೋಕವನ್ನು ಹೇಗೆಲ್ಲಾ ದೊಡ್ಡದು ಮಾಡಿತು? ತನ್ನ ಮನೆಗಿಂತ ತುಂಬಾ ಬೇರೆಯೇ ಆಗಿದ್ದ ಆ ಊರು ಅವನ ಪುಟ್ಟ ಕಣ್ಣಿಗೆ ಏನೆಲ್ಲಾ ಹೊಸ ನೋಟಗಳನ್ನು ಕೊಟ್ಟು ಬೆಳೆಸಿತು? ಈ ನಾಲ್ಕು ಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನು ಜೊತೆಯಾಗಿ ದಾಟಿದರು?

ಚಿಣ್ಣರನ್ನು ರಂಜಿಸುವ ಈ 'ಪುಟಾಣಿ' ಕಾದಂಬರಿ, ದೊಡ್ಡವರನ್ನೂ ಅವರವರ ಬಾಲ್ಯದ ಒಣೇಗಳಿಗೆ ಕರೆದೊಯ್ಯುತ್ತದೆ.


Similar products


Home

Cart

Account