Product details
ನನ್ನ ತಂಗಿ ರೋಯ ಆಸ್ಪತ್ರೆಯಲ್ಲಿ ಇದ್ದ ಆ ರಾತ್ರಿ, ಅವಳ ಬಗ್ಗೆ ಒಂದು ಕನಸು ಕಂಡೆ. ಮಾರನೆಯ ದಿನ ಬೆಳಿಗ್ಗೆ. ಅವಳು ತೀರಿಕೊಂಡಿದ್ದಾಳೆ ಅಂತ ಅಮ್ಮ ಹೇಳಿದಳು. ನಾನು ತುಂಬಾ ಅತ್ತೆ. “ಝೋಯ ಸದಾ ನಮ್ಮ ಜೊತೆ ಇರ್ತಾಳೆ ಕಂದ,” ಅಮ್ಮ ಅಂದಳು. ಅವಳು ಸುಳ್ಳು ಹೇಳುತ್ತಿದ್ದಳು. ನನಗೆ ಗೊತ್ತಿತ್ತು. ನೂರಿಯ ತಂಗಿ ಝೋಯ ತೀರಿಕೊಂಡಾಗ, ನೂರಿಯ ಜಗತ್ತಿನಲ್ಲಿ ನೀರವ ಮೌನ ಆವರಿಸಿತು. ಅವಳಿಗೆ, ತನ್ನ * ತಂಗಿ ಎಂದೆಂದಿಗೂ ದೂರವಾದದ್ದು ಗೊತ್ತಿತ್ತು. ಆದರೆ, ಝೋಯ ಸದಾ ನಮ್ಮ ಜೊತೆಯೇ ಇರುತ್ತಾಳೆ ಅನ್ನುವ ಅಮ್ಮನ ಹುಸಿ ಸುಳ್ಳುಗಳ ಕತೆಯೇನು? ಮತ್ತೆ, ನೂರಿಯನ್ನು ಅವಳ ಪಾಡಿಗೆ ಇರಲು ಬಿಡದ ಝೋಯಾಳ ಬೆಸ್ಟ್ ಫ್ರೆಂಡ್ ಧಾರಾಳನ್ನು ಏನು ಮಾಡೋದು! ಪ್ರೀತಿ ಹಾಗೂ ಅಗಲಿಕೆಯಲ್ಲಿಯೂ ತುಂಬು ವಿಶ್ವಾಸವನ್ನು ಕಂಡುಕೊಳ್ಳುವ ಒಂದು ನವಿರಾದ ಕತೆ – “ಬೂ!”.
Similar products