Product details
ಚಿಟ್ಟಿ ಪಶ್ಚಿಮ ಘಟ್ಟಗಳ ಕಾಡು ತೋಟದಲ್ಲಿ ಸ್ವಚ್ಚಂದವಾಗಿ ಬದುಕುವ ಚೇತೋಹಾರಿ ಜೀವಿ. ಕಾಡು ಪ್ರಾಣಿಗಳನ್ನು ಎದುರುಗೊಳ್ಳುವ ಮೈನವಿರೇಳಿಸುವ ಅನುಭವ: ಮಳೆಹುಳುಗಳನ್ನು ಕಬಳಿಸುವ ರೋಚಕ ಕ್ಷಣಗಳನ್ನೆಲ್ಲಾ ತನ್ನದಾಗಿಸಿಕೊಳ್ಳುವ ಚಿಟ್ಟಿಗೆ ಹಲಸಿನ ಹಣ್ಣಿನ ಚಿಪ್ಸ್ ಎಂದರೆ ಪ್ರಾಣ. ಅಸಾಧಾರಣ ಬುದ್ಧಿಮತ್ತೆಯ, ಚೈತನ್ಯದ ಚಿಲುಮೆ ಚಿಟ್ಟಿ, ವಿವೇಕಿಯೂ ಹೌದು, ನಿಷ್ಠಾವಂತ ಗೆಳತಿಯೂ ಹೌದು. ಚಿಟ್ಟಿ ಇಲ್ಲಿ ಕಾಡಿನ ಅಂಕುಡೊಂಕಿನ ಹಾದಿಯ ತನ್ನ ಸಾಹಸ ಲೋಕದಲ್ಲಿ ನಮ್ಮನ್ನು ಸುತ್ತಾಡಿಸುತ್ತಾಳೆ. ತನ್ನ ಕೌತುಕಮಯ ಲೋಕದಲ್ಲಿ ನಮ್ಮನ್ನು ನಗಿಸುತ್ತಾಳೆ, ಅಳಿಸುತ್ತಾಳೆ, ಬೆರಗುಗೊಳಿಸುತ್ತಾಳೆ.
Similar products