Product details
ಖ್ಯಾತ ಕವಿ-ವಿಮರ್ಶಕ-ಲೇಖಕ ಡಾ. ಕೆ.ವಿ. ತಿರುಮಲೇಶ್ ಅವರ ಮಕ್ಕಳ ಕವನ ಸಂಕಲನ-ಚಿಕ್ಕಣಿ ರಾಜ. ಮಕ್ಕಳ ಸಾಹಿತ್ಯ ಕೃತಿಗಳು ಸಂಖ್ಯೆಯಲ್ಲಿ ಕಡಿಮೆ ಎನ್ನುತ್ತಿದ್ದಂತೆ ಸಾಹಿತ್ಯವಲಯದಲ್ಲಿ ತುಂಬಿಕೊಳ್ಳುತ್ತಿವೆ. ಆದರೆ, ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಗುಣಮಟ್ಟದ ಕೃತಿಗಳನ್ನು ಪರಾಮರ್ಶಿಸುವ ಅಗತ್ಯವಿದೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವುದರ ಮಧ್ಯೆಯೇ ಹಿರಿಯ ಸಾಹಿತಿ ಕೆ.ವಿ. ತಿರುಮಲೇಶ್ ನಂತಹವರು ಮಕ್ಕಳ ಕವಿತೆಗಳನ್ನು ರಚಿಸುತ್ತಿರುವುದು ಸ್ವಾಗತಾರ್ಹ. ಮಗುವಿನ ಬೆಳವಣಿಗೆಯಲ್ಲಿ, ಅವರ ಕಲ್ಪನಾ ಲೋಕದ ವಿಸ್ತಾರದಲ್ಲಿ, ಪಾಲಕ-ಪೋಷಕರು ಮಕ್ಕಳ ಮನಸ್ಸಿನಲ್ಲಿಳಿದು ಅರ್ಥ ಮಾಡಿಕೊಳ್ಳುವ ವಿಧಾನ ಎಲ್ಲ ರೀತಿಯ ಪ್ರಕ್ರಿಯೆಗಳನ್ನು ಕವಿತೆಗಳಲ್ಲಿ ಕಾಣಬಹುದು. .
Similar products