Search for products..

Home / Categories / 13+ Years /

ದಿ ರೈಲ್ವೆ ಚಿಲ್ಡ್ರನ್

ದಿ ರೈಲ್ವೆ ಚಿಲ್ಡ್ರನ್

Select Language *



Product details

ದಿ ರೇಲ್ವೆ ಚಿಲ್ಡ್ರನ್' ಕೃತಿ ಕನ್ನಡಕ್ಕೆ ಬರುತ್ತಾ ಕನ್ನಡ ಮಕ್ಕಳ ಸಾಹಿತ್ಯದ ವಾತಾವರಣದಲ್ಲಿ ಕೆಲವು ಅಗತ್ಯದ ಮಾತುಗಳನ್ನು ಆಡುತ್ತಿದೆ. ಮಕ್ಕಳ ಸಾಹಿತ್ಯ ಸೊಗಸಾಗಿ ಬೆಳೆದು ಮಹತ್ವದ್ದಾಗಿ ಗೋಚರಿಸಿರುವ ಇಂಗ್ಲಿಷಿನಿಂದ ಅದು ಕನ್ನಡಕ್ಕೆ ಬಂದಿದೆ. ಮಕ್ಕಳ ಸುತ್ತಲಿನ ವಾಸ್ತವಕ್ಕೆ ತೆರೆದುಕೊಂಡು ಇಂಗ್ಲಿಷಿನಲ್ಲಿ ಹೊಸ ಹೆಜ್ಜೆಗಳಿಗೆ ಈ ಕೃತಿ ಕಾರಣವಾಗಿದೆ. ಈಗ ಕನ್ನಡದಲ್ಲಿಯೂ ಅದರ ಚಲನೆಯನ್ನು ಹಿಗ್ಗಿಸುತ್ತಿದೆ. ಮಕ್ಕಳ ಸುತ್ತ ಹರವಿಕೊಂಡಿರುವ ಒಂದು ಕಾದಂಬರಿಯಾಗಿ ಕನ್ನಡದ ಮಕ್ಕಳಿಗೆ ಹೊಸ ಓದಿನ ಸವಿಯನ್ನು ಈ ಕೃತಿ ನೀಡಲಿದೆ. ಇಪ್ಪತ್ತನೆಯ ಶತಮಾನದ ಆರಂಭದ ಹೊತ್ತಿಗೆ ಇಂಗ್ಲಿಷ್ ವಾತಾವರಣದಲ್ಲಿ ಈ ಕೃತಿ ಹುಟ್ಟಿಕೊಂಡಿತು. ಅಂದಿನ ವಾತಾವರಣವನ್ನು ಮುಂದಿಡುತ್ತಲೇ, ಅಲ್ಲಿ ನಿಧಾನವಾಗಿ ಹರಡಿಕೊಳ್ಳತೊಡಗಿದ್ದ ಮಕ್ಕಳ ಸಾಹಿತ್ಯದ ವಾತಾವರಣಕ್ಕೂ ಕಿಟಕಿಯಾಯಿತು. ಇಂದು ಕನ್ನಡ ಮಕ್ಕಳ ಸಾಹಿತ್ಯದ ಓದುಗರಿಗೂ, ಅಧ್ಯಯನಾಸಕ್ತರಿಗೂ ವಿಶಿಷ್ಟವಾದ ಕಥನದ ಮೂಲಕ ಅಲ್ಲಿನ ಬೆಳಕು ತೆರೆದುಕೊಳ್ಳುತ್ತಿದೆ.

ಎಡಿತ್ ನೆಸ್ಟಿಟ್ ತನ್ನ ಬದುಕನ್ನು ದಿಟ್ಟವಾಗಿ ಕಟ್ಟಿಕೊಂಡ ಲೇಖಕಿ, ಅವರ ಕಾದಂಬರಿಯಲ್ಲಿ, ಒಂದೇ ಮನೆಯ ವಿಭಿನ್ನ ಸ್ವಭಾವದ ಮಕ್ಕಳು ರೈಲು ನಿಲ್ದಾಣದ ಸುತ್ತ ತಮ್ಮ ಬಾಲ್ಯದ ಅನುಭವಗಳನ್ನು ಕಟ್ಟಿಕೊಳ್ಳುತ್ತಾರೆ. ಇದು, ಅವರ ಬದುಕು ಮಕ್ಕಳ ಲೋಕದ ಹಂಬಲಗಳಿಗೂ ಮಾತಾಗುತ್ತಾ ಆಸಕ್ತಿ ಮೂಡಿಸುತ್ತಿರುವುದನ್ನು ಈ ಕೃತಿ ಸೂಚಿಸುತ್ತದೆ.


Similar products


Home

Cart

Account