
Product details
Kannada: Gedde Bitte! / ಗೆದ್ದೇ ಬಿಟ್ಟೆ! by Nivedha Ganesh
Translated into Kannada by Santosha Tamraparni
ಸ್ನೇಹಿತರಾದವರು ನಿಮ್ಮ ಬೆನ್ನ ಹಿಂದೆ ಎಂದಿಗೂ ಕೀಳಾಗಿ ಮಾತನಾಡುವುದಿಲ್ಲ. ನಿಜ ಸ್ನೇಹಿತರಾದವರು ಆಟಕ್ಕೆ ಹೆಚ್ಚುವರಿ ಆಟಗಾರನ ಆಗತ್ಯವಿಲ್ಲದಿದ್ದರೂ, ನಿಮ್ಮನ್ನು ಸೇರಿಸಿಕೊಂಡೇ ಕ್ರಿಕೆಟ್ ಆಡುತ್ತಾರೆ.
ಸ್ನೇಹಿತರ ಜತೆ ಜಗಳವಾಡಿಕೊಂಡಿರುವ 13 ವರ್ಷದ ದಿವ್ಯಾ ಗ್ರಾಮದ ಕೊಳದಲ್ಲಿ ನೀರಿನೊಂದಿಗೆ ಆಡುತ್ತಾ ಮನಸ್ಸನ್ನು ತಿಳಿಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ. ಆ ದಿನ ಅವಳಿಗೆ ಸಿಕ್ಕ ಸಲಹೆ ಅವಳು ಸ್ಪರ್ಧಾತ್ಮಕ ಈಜಿನ ಲೋಕಕ್ಕೆ ಪ್ರವೇಶಿಸುವಂತೆ ಮಾಡುತ್ತದೆ. ಅದು ಅವಳನ್ನು ಸಿರುಗನಪುರದ ಹತ್ತಿ ಹೊಲಗಳ ಬಳಿ ಇರುವ ಅವಳ ಮನೆಯಿಂದ ಬಹು ದೂರಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಆಕೆಗೆ ಮತ್ತೊಬ್ಬ ಈಜುಗಾರ್ತಿ ಅಂಬಿಕಾಳ ಗೆಳೆತನ ಸಿಗುತ್ತದೆ. ಈ ಗೆಳೆತನವನ್ನು ಉಳಿಸಿಕೊಳ್ಳಲು ದಿವ್ಯಾ ಯಶಸ್ವಿಯಾಗುತ್ತಾಳೆಯೇ? ವಾಸ್ತವದೊಂದಿಗೆ ತನ್ನ ಕಲ್ಪನೆಯನ್ನೂ ಬೆಸುಗೆ ಹಾಕಿರುವ ನಿವೇಧಾ ಗಣೇಶ್ ಅವರ ಈ ಕಥೆ ಮನರಂಜನೆ, ಸ್ಫೂರ್ತಿ ನೀಡುವ ಜೊತೆಗೆ ಕತೆಯೊಳಗೆ ನಮ್ಮನ್ನು ಕಂಡುಕೊಳ್ಳುವಂತೆ ಮಾಡುತ್ತದೆ.
Similar products