Search for products..

Home / Categories / 1-2 Years /

ಕನ್ನಡ ಅಂಕಲಿಪಿ

ಕನ್ನಡ ಅಂಕಲಿಪಿ

Select Language *



Product details

ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು”.
ಅಂದರೆ ನಮ್ಮ ಮಾತೃಭಾಷೆ ಕನ್ನಡದ ಕಲಿಕೆ ಶುರುವಾಗಬೇಕಿರೋದು ಮನೆಯಿಂದ.
ಕರ್ನಾಟಕದ ಮಕ್ಕಳಿಗೆ ನಮ್ಮ ಮಾತೃಭಾಷೆ ಹೇಳಿಕೊಡಲು, ಕನ್ನಡ ಶಾಲೆಯಲ್ಲಿ ಪಠ್ಯಕ್ರಮವಾಗಿ ಬರುವವರೆಗೆ ಕಾಯುವ ಅಗತ್ಯವಿಲ್ಲ. ಇಂದಿನಿಂದಲೇ ನಿಮ್ಮ ಮಗುವಿಗೆ “ಕನ್ನಡ ಅಂಕಲಿಪಿ” ಪುಸ್ತಕದ ಸಹಾಯದಿಂದ ಕನ್ನಡ ಅಕ್ಷರಗಳ ಕಲಿಕೆ ಶುರುಮಾಡಬಹುದು. 
ಪ್ರಾರಂಭದ ಕನ್ನಡ ಅಕ್ಷರ ಕಲಿಕೆಗೆ ಅನುಕೂಲವಾಗುವಂತಹ ಪುಸ್ತಕಗಳು ಬೆರಳೆಣಿಕೆಯಷ್ಟು. ಅದರಲ್ಲೂ ಇರುವುದೆಲ್ಲ ಹಳೆ ಮಾದರಿಯಲ್ಲಿ ಇರುವುದರಿಂದ, ಅವು ಮಕ್ಕಳ ಗಮನ ಸೆಳೆಯುವಲ್ಲಿ ವಿಫಲವಾಗುತ್ತಿವೆ.
ಅದಕ್ಕಾಗಿ ಮನೆಯಲ್ಲಿರುವ ಪುಟ್ಟ ಮಗುವಿಗೆ ಕನ್ನಡ ಅಕ್ಷರಗಳ ಪರಿಚಯ ಮಾಡಲು ಪಾಲಕರಿಗೆ ಸಹಾಯವಾಗುವಂತೆ,  ಸುಲಭವಾಗಿ ಹೇಳಿಕೊಡಲು ಅನುಕೂಲವಾಗುವಂತೆ, ಈ “ಕನ್ನಡ ಅಂಕಲಿಪಿ” ಪುಸ್ತಕವನ್ನು ರಚಿಸಲಾಗಿದೆ. 
ಆರಂಭಿಕ ಪಾಠಗಳಿಗೆ ಬೇಕಾಗಿರುವ ವರ್ಣಮಾಲೆ, ಕಾಗುಣಿತ, ಕನ್ನಡ ಅಂಕಿಗಳು,ಸಾಮಾನ್ಯಜ್ಞಾನ, ಗಾದೆಮಾತುಗಳನ್ನು, ಚಿಣ್ಣರನ್ನು ಆಕರ್ಷಿಸುವ ಬಣ್ಣ ಬಣ್ಣದ ಚಿತ್ರಗಳನ್ನು ಬಳಸಿ ಹೊಸ ರೂಪದಲ್ಲಿ ಕಟ್ಟಿಕೊಡುತ್ತಿದ್ದೇವೆ.
ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲು ಇದೊಂದು ಒಳ್ಳೆಯ ಪುಸ್ತಕ. ಉತ್ತಮ ಗುಣಮಟ್ಟದ ಮುದ್ರಣವನ್ನು ಕೂಡ ಮಾಡಿರುವುದರಿಂದ, ಚಿಕ್ಕ ಮಕ್ಕಳಿಗೆ ಹುಟ್ಟುಹಬ್ಬ ಅಥವಾ ಇತರ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಕೊಡುವುದಕ್ಕೆ ಕೂಡಾ ತುಂಬಾ ಸೂಕ್ತವಾದ ಪುಸ್ತಕವಿದು.


Similar products


Home

Cart

Account