Product details
ಲೇಖಕ ಆನಂದ ಪಾಟೀಲ ಅವರು ಬರೆದ ಮಕ್ಕಳ ಕಥನ ಕವನ ʻ ಮಲ್ಲಿಗೆ ಹುಡುಗʼ. ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, “ ಮಲ್ಲಿಗೆ ಹುಡುಗ ದಿನವೂ ಬಂದು ಕಾಡಿಸಿ ಹೂವು ನೀಡುತ್ತಿದ್ದವನು ಇದ್ದಕಿದ್ದ ಹಾಗೆ ಒಂದು ದಿನ ಕಾಣೆಯಾದಾಗ ಓಣಿಯ ಜನರೆಲ್ಲ ಅದೇನೋ ಕಳೆದುಕೊಂಡಂತೆ ಕಳವಳ ಅನುಭವಿಸುವ ಪ್ರಸಂಗ ಇಲ್ಲಿನ ಕಥನ ಕಾವ್ಯದಲ್ಲಿದೆ. ಮಲ್ಲಿಗೆ ಹೂವು ಮಾರುವ ಹುಡುಗ ಕಾಣೆಯೇನೋ ಆದ, ಆದರೆ ಮಲ್ಲಿಗೆಯ ಹೂವುಗಳ ಘಮ್ ಎನ್ನುವ ವಾಸನೆಯ ಹಾಗೆ ನೆನಪನ್ನ ಅಳಿಸದಂತೆ ಬಿಟ್ಟುಹೋದ ಹುಡುಗನ ಸುತ್ತ ಸುಳಿದಾಡಲು, ಮಲ್ಲಿಗೆಯ ಕಂಪು ಮತ್ತೆ ಮತ್ತೆ ಹೀರತ್ತದೆ ಈ ಚಿತ್ರಹೊತ್ತಿಗೆ”. ಸಂತೋಶ್ ಸಶಿಹಿತ್ಲು ಅವರು ಪುಸ್ತಕದಲ್ಲಿ ಚಿತ್ರಗಳನ್ನು ರಚಿಸಿದ್ದಾರೆ.
Similar products