Product details
ಇದು ವೈಭವಯುಕ್ತ ಮಹಶೀರ್ ಮೀನು-ನದಿಯ ಹುಲಿ, ಮತಿಶಾಳ ಅಚ್ಚರಿಗೊಳಿಸುವ ಕಥೆ. ರಭಸದಿಂದ ಹರಿವ ಕಾವೇರಿ ನದಿಯ ಕಣಿವೆಯೊಂದರಲ್ಲಿ ಜೀವಿಸುತ್ತಾಳೆ ಮತಿಶಾ ಎಂಬ ಸ್ಪೆಷಲ್ ಮೀನು, ಜಗತ್ತಿನ ಅತ್ಯಂತ ದೊಡ್ಡ ಮತ್ತು ಸುಂದರ ಸಿಹಿ ನೀರಿನ ಮೀನುಗಳಲ್ಲಿ ಇದೂ ಒಂದು. ನೀರೊಳಗಿನ ನಿಗೂಢ ಪ್ರಪಂಚವನ್ನು ಶೋಧಿಸಲು ಮತಿಶಾಗೆ ತುಂಬಾ ಇಷ್ಟ ತನ್ನೊಂದಿಗೆ ನದಿಯನ್ನು ಹಾಗೂ ಸುತ್ತಲಿನ ಕಾಡನ್ನು ಹಂಚಿಕೊಂಡಿರುವ ಇತರೆ ಅನೇಕ ಪ್ರಾಣಿಗಳನ್ನು ಭೇಟಿ ಮಾಡುತ್ತಾಳೆ. ವಿಭಿನ್ನ ಆಕಾರ ಮತ್ತು ಗಾತ್ರದ ವಿಚಿತ್ರ ಮೀನುಗಳು ಹಾಗೂ ನದಿಯ ಬಳಿ ಕೆಲವೊಮ್ಮೆ ಬರುವ ದೊಡ್ಡ, ಬಲಿಷ್ಠ ಪ್ರಾಣಿಗಳಾದ ಹುಲಿ ಮತ್ತು ಆನೆಗಳು ಅವಳನ್ನು ಆಕರ್ಷಿಸುತ್ತವೆ. ಅವಳು ತನ್ನನ್ನು ಭೇಟೆಯಾಡಿ ತಿನ್ನಲು ಇಷ್ಟಪಡುವ ಹಸಿದ ಹಕ್ಕಿ, ಮೊಸಳೆ ಹಾಗೂ ನೀರುನಾಯಿಗಳಿಂದ ನುಣುಚಿಕೊಂಡು ಹೋಗುತ್ತಾಳೆ. ಈ ಎಲ್ಲ ಪ್ರಾಣಿಗಳಿಗಿಂತಲೂ ಹೆಚ್ಚು ಅಪಾಯಕಾರಿಯಾದ ಮನುಷ್ಯರ ಬಗ್ಗೆಯೂ ತಿಳಿದುಕೊಳ್ಳುತ್ತಾಳೆ. ಕನಸಿನಂತಹ ಈ ಕಥೆಯಲ್ಲಿ, ನದಿಯ ಪ್ರವಾಹಕ್ಕೆ ಎದುರಾಗಿ ವಲಸೆಹೋಗಿ ತನ್ನ ಅಮೂಲ್ಯವಾದ ಮೊಟ್ಟೆಗಳನ್ನು ಇಡಲು ಮತಿಶಾ ಮಾಡುವ ಅದ್ಭುತ ಸಾಹಸಗಳನ್ನು ಓದಿ ನೋಡಿ. ಮಾಯಾ ರಾಮಸ್ವಾಮಿ ಅವರ ಸುಂದರವಾದ ಚಿತ್ರಗಳು ಒಂದು ಮೋಹಕವಾದ. ಅಳಿವಿನ ಅಂಚಿನಲ್ಲಿರುವ ಜೀವರಾಶಿಯ ಕಣ್ಣಿನ ಮೂಲಕ ಪಶ್ಚಿಮ ಘಟ್ಟಗಳನ್ನು ಪರಿಚಯಿಸುತ್ತವೆ. ಬಣ್ಣದ ಚಿತ್ರಗಳು ಕಾವೇರಿಯ ನೀರಿನೊಳಗಿರುವ ಅದೃಶ್ಯ ಜಗತ್ತನ್ನು ನಮ್ಮ ಮುಂದಿಡುತ್ತವೆ. ಅಪೂರ್ವ ಬಿ ಎ ಅವರು ಅಷ್ಟೇ ಸಮರ್ಥವಾಗಿ ಇದನ್ನು ಅನುವಾದಿಸಿದ್ದಾರೆ.
Similar products